ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಬೂಕರ್ ಭಾನು, ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಳ್ಳುವರೇ ? - ಮಾಜಿ ಸಂಸದ ಸಿಂಹ | JANATA NEWS

ಮೈಸೂರು : ದಸರಾ ಆಚರಣೆಯ ಉದ್ಘಾಟನೆಯ ಕುರಿತು ವಿವಾದ ಸೃಷ್ಟಿಯಾಗುವುದು ಪ್ರತಿ ವರ್ಷದಂತೆ ಈ ವರ್ಷವೂ ಮುಂದುವರೆದಿದ್ದು, ಸಿಎಂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ರಾಜ್ಯ ಸರ್ಕಾರ ಈ ಭಾರಿ ಮುಸ್ಲಿಂ ಸಮುದಾಯದ ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಮುಂದಾಗಿದೆ.
ಹಿಂದೂ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಅವರನ್ನು ಕರೆದಿರುವುದು ಸಾಕಷ್ಟು ವಿವಾದವನ್ನು ಉಂಟು ಮಾಡಿದ್ದು, ಪ್ರತಿಪಕ್ಷ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಇದರ ಹಿಂದಿನ ಮರ್ಮವನ್ನು ಪ್ರಶ್ನಿಸಿದೆ.
ಅವರ ಹಳೆ ವಿಡಿಯೋ ಒಂದು ಈ ಸಂದರ್ಭದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಕನ್ನಡದ ತಾಯಿ ಭುವನೇಶ್ವರಿ ಕುರಿತು ಹಾಗೂ ಕನ್ನಡ ಬಾವುಟದ ಬಣ್ಣದ ಕುರಿತು ಅಸಮಾಧಾನ ಹೊರಹಾಕಿದ್ದರು.
ಈ ವಿಡಿಯೋ ತುಣುಕನ್ನು ಷೇರ್ ಮಾಡಿರುವ ಸಿಂಹ ಅವರು, "ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಭಾನು? ಜನ ಸಾಹಿತ್ಯ ಸಮ್ಮೇಳನ - ೨೦೨೩ ರಲ್ಲಿ ಬಾನು ಮುಸ್ತಾಕ್ ರವರು ಮಾಡಿದ ಭಾಷಣ.", ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, "ಬೂಕರ್ ಪ್ರಶಸ್ತಿಯನ್ನು ಪಡೆದಿರುವ ಭಾನು ಮುಷ್ತಾಕ್ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮಾಡಿ, ಆದರೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಕರೆಯುವುದು ಸೂಕ್ತವೇ?!", ಎಂದು ಪ್ರಶ್ನಿಸಿದ್ದಾರೆ.
ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಭಾನು?
— Prathap Simha (@mepratap) August 25, 2025
------‐--------------------------
ಜನ ಸಾಹಿತ್ಯ ಸಮ್ಮೇಳನ - ೨೦೨೩ ರಲ್ಲಿ ಬಾನು ಮುಸ್ತಾಕ್ ರವರು ಮಾಡಿದ ಭಾಷಣ. https://t.co/CBrf96yvHl pic.twitter.com/VPrRD9KHQJ