Sat,Oct18,2025
ಕನ್ನಡ / English

ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿಗೆ ಕಲ್ಲು | JANATA NEWS

02 Jul 2023

ದಾವಣಗೆರೆ : ನಾಲ್ಕು ದಿನದ ಹಿಂದೆ ಆರಂಭವಾದ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿರುವ ಘಟನೆ ದಾವಣಗೆರೆ ನಗರದ ಹೊರವಲಯದ ಜಿಎಂಐಟಿ ಹಿಂಭಾಗದಲ್ಲಿ ನಡೆದಿದೆ.

ದಾವಣಗೆರೆ ಹೊರವಯಲದಲ್ಲಿರುವ ಜಿಎಂಐಟಿ ಕಾಲೇಜಿನ ಹಿಂಭಾಗ ಶನಿವಾರ ಕೆಲವು ಕಿಡಿಗೇಡಿಗಳು ಚಲಿಸುತ್ತಿದ್ದ ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ ನಡೆಸಿದ್ದು, ಇದರ ಪರಿಣಾಮ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಿಟಕಿಯ ಗಾಜು ಜಖಂಗೊಂಡಿದೆ. ಈ ರೈಲು ಧಾರವಾಡದಿಂದ ಬೆಂಗಳೂರು ಕಡೆಗೆ ಸಂಚರಿಸುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ನೈಋತ್ಯ ರೈಲ್ವೆಯ ಅಧಿಕಾರಿಗಳು ಈ ಘಟನೆಯನ್ನು ಆರ್‌ಪಿಎಫ್ ಸಿಬ್ಬಂದಿಗೆ ವರದಿ ಮಾಡಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ. ಕಲ್ಲು ತೂರಾಟದಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಕುರಿತು ರೈಲ್ವೆ ಆರ್‌ಪಿಎ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ದಾವಣಗೆರೆ ಮತ್ತು ಅರಸೀಕೆರೆ ನಡುವಿನ ಹೊಸದುರ್ಗ, ಹೊಳಲ್ಕೆರೆ, ಚಿಕ್ಕಜಾಜಾರು ಭಾಗದಲ್ಲಿ ಹಲವು ಕಡೆ ವಂದೇ ಭಾರತ್ ರೈಲು ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಬಗ್ಗೆ ರೇಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿತ್ತು. ಈ ಬಗ್ಗೆ ಬೆಂಗಳೂರು ರೇಲ್ವೆ ವಿಭಾಗೀಯ ಕಚೇರಿ ಇಲಾಖೆಗೆ ಸಂಬಂಧದಿಸಿದ ವಸ್ತುಗಳಿಗೆ ಹಾನಿಯುಂಟು ಮಾಡಿದರೆ, ಅಂತವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

RELATED TOPICS:
English summary :Stone for Dharwad-Bangalore Vande Bharat train ​

ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ

ಸರ್ಕಾರಿ ಸ್ಥಳಗಳಲ್ಲಿ ನಮಾಜ್  ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ

33 ಸಾವಿರ ಕೋಟಿ ಬಿಲ್‌ ಬಾಕಿ ತೆರವು ಗೊಳಿಸಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಒತ್ತಾಯ

ಪಂಜಾಬ್‌ ಡಿಐಜಿ ಬಂಧಿಸಿದ ಸಿಬಿಐ : ಹಿರಿಯ ಐಪಿಎಸ್ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣದ ಹೊಳೆ

ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ

ವಿಷ್ಣು ವಿಗ್ರಹ ಪ್ರಕರಣದಲ್ಲಿ ಸಿಜೆಐ ವಿವಾದಾತ್ಮಕ ಹೇಳಿಕೆ : ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ

ಅಧಿಕಾರ ಹಂಚಿಕೆ ಹಗ್ಗಜಗ್ಗಾಟ : ಸಿದ್ದರಾಮಯ್ಯ ಬಳಿಕ ಈಗ ಶಿವಕುಮಾರ್ ಹೇಳಿಕೆ ಬಿಡುಗಡೆ

ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ

ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ

ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ

ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ

ನ್ಯೂಸ್ MORE NEWS...