Sat,Oct18,2025
ಕನ್ನಡ / English

ಸ್ಲೀಪರ್ ಕೋಚ್ ಬಸ್​​ನಲ್ಲೇ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು, ಯುವತಿ ಸಾವು | JANATA NEWS

06 Jun 2023

ಹಾವೇರಿ : ಪ್ರೇಮಿಗಳು ಸ್ಲೀಪರ್ ಕೋಚ್ ಬಸ್​ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದ್ದು ಯುವತಿ ಸಾವನ್ನಪ್ಪಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹೇಮಾ ರಾಮಕೃಷ್ಣಪ್ಪ (20) ಮೃತಪಟ್ಟ ಯುವತಿ. ಇತ್ತ ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಬಾಗಲಕೋಟೆ ಮೂಲದ ಅಖಿಲ್​​ ಮತ್ತು ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಬೆಂಗಳೂರು ಮೂಲದ ಹೇಮಾ ರಾಮಕೃಷ್ಣಪ್ಪ ಪರಸ್ಪರ ಪ್ರೀತಿಸುತ್ತಿದ್ದು, ಬಾಳುವುದಾದರೆ ಇಬ್ಬರೂ ಜೊತೆಗೆ ಬಾಳುವ ನಿರ್ಣಯ ಮಾಡಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನೊಂದ ಅಖಿಲ್ ಮತ್ತು ಹೇಮಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ತಮ್ಮ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನೊಂದ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್ ಹತ್ತಿದ್ದಾರೆ. ನಂತರ ವಿಷ ಸೇವಿಸಿಕೊಂಡ ಅಖಿಲ್ ಮತ್ತು ಹೇಮಾ ನಿದ್ರಿಸಿದ್ದಾರೆ.

ಈ ನಡುವೆ ಊಟಕ್ಕೆ ಬಸ್ ನಿಲ್ಲಿಸಿದಾಗ ಬಸ್ ನಲ್ಲಿದ್ದವರಿಗೆ ಅನುಮಾನ ಬಂದಿದೆ. ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೂ ದುರಾದೃಷ್ಟವಶಾತ್ ಹೇಮಾ ಕೊನೆಯುಸಿರೆಳೆದಿದ್ದಾಳೆ. ಘಟನೆ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED TOPICS:
English summary :Lovers, young woman died after drinking poison in sleeper coach bus

ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ

ಸರ್ಕಾರಿ ಸ್ಥಳಗಳಲ್ಲಿ ನಮಾಜ್  ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ

33 ಸಾವಿರ ಕೋಟಿ ಬಿಲ್‌ ಬಾಕಿ ತೆರವು ಗೊಳಿಸಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಒತ್ತಾಯ

ಪಂಜಾಬ್‌ ಡಿಐಜಿ ಬಂಧಿಸಿದ ಸಿಬಿಐ : ಹಿರಿಯ ಐಪಿಎಸ್ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣದ ಹೊಳೆ

ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ

ವಿಷ್ಣು ವಿಗ್ರಹ ಪ್ರಕರಣದಲ್ಲಿ ಸಿಜೆಐ ವಿವಾದಾತ್ಮಕ ಹೇಳಿಕೆ : ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ

ಅಧಿಕಾರ ಹಂಚಿಕೆ ಹಗ್ಗಜಗ್ಗಾಟ : ಸಿದ್ದರಾಮಯ್ಯ ಬಳಿಕ ಈಗ ಶಿವಕುಮಾರ್ ಹೇಳಿಕೆ ಬಿಡುಗಡೆ

ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ

ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ

ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ

ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ

ನ್ಯೂಸ್ MORE NEWS...