Sat,Oct18,2025
ಕನ್ನಡ / English

ಕಾಂಗ್ರೆಸ್ ಪೋಷಣೆಯೇ PFI ಬೆಳವಣಿಗೆಗೆ ಕಾರಣ: ಸುನಿಲ್ ಕುಮಾರ್ | JANATA NEWS

28 Sep 2022

ಉಡುಪಿ : ಪಿಎಫ್‌ಐ ಈ ಮಟ್ಟಿಗೆ ಬೆಳೆಯುವುದಕ್ಕೆ ಕಾಂಗ್ರೆಸ್ ಪೋಷಣೆಯೇ ಕಾರಣ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ. ಪಿಎಫ್ಐ ಬ್ಯಾನ್ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಅವರು, ಪಿಎಫ್ಐ ಸಂಘಟನೆ ಬ್ಯಾನ್ ಮಾಡಿರುವುದು ಸ್ವಾಗತಾರ್ಹ. ಕಠಿಣ ನಿರ್ಧಾರ ತೆಗೆದುಕೊಂಡ ಪ್ರಧಾನಿ, ಗೃಹ ಸಚಿವರಿಗೆ ಅಭಿನಂದನೆ ಎಂದರು.

PFI ಹಿಂಸೆ ಮಾಡುತ್ತಾ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿತ್ತು. ಹಿಂದೂ ಸಂಘಟನೆಯ ಟಾರ್ಗೆಟ್ ಹಾಗೂ ಹತ್ಯೆ ಪಿಎಫ್ಐ ಕೆಲಸವಾಗಿತ್ತು. ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಈ ಸಂಘಟನೆ ಮುಂದಾಗಿತ್ತು ಎಂದು ಹೇಳಿದ್ದಾರೆ.

ಪಿಎಫ್‌ಐ, ಐಸಿಸ್‌ನಂತಹ ಜಾಗತಿಕ ಉಗ್ರ ಸಂಘಟನೆಗಳ ಜತೆ ಸಂಬಂಧ ಹೊಂದಿತ್ತು. ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ್ದು ಮಾತ್ರವಲ್ಲ, ಮುಸ್ಲಿಂ ಯುವಕರ ತಲೆಕೆಡಿಸಿ ಅವರನ್ನು ಐಸಿಸ್ ಸಂಘಟನೆಗೆ ಕಳುಹಿಸುತ್ತಿತ್ತು ಎಂದು ಹೇಳಿದರು.

ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಇದೇ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದಾಗ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಿರಲಿಲ್ಲ. ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತನ್ನದೇ ಶಾಸಕರ ಮನೆಗೆ ಬೆಂಕಿ ಹಚ್ಚಿದಾಗಲೂ ಕಾಂಗ್ರೆಸ್ ಧ್ವನಿ ಎತ್ತಿರಲಿಲ್ಲ. ಇದು ಪಿಎಫ್‌ಐ ಪರ ಕಾಂಗ್ರೆಸ್ ತಾಳಿದ್ದ ಮೃದು ಧೋರಣೆಗೆ ಸಾಕ್ಷಿಯಾಗಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗೆ ದೇಶದಲ್ಲಿ ಅವಕಾಶ ಇಲ್ಲ. ವಿದೇಶಿ ಹಣ ವರ್ಗಾವಣೆ, ಹಿಂಸೆ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರಕಾರ PFI ಗೆ ಬೆಂಬಲವಾಗಿ ನಿಂತಿತ್ತು. ದುಷ್ಕೃತ್ಯ ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಸರಕಾರ ಉಗ್ರ ಸಂಘಟನೆಗಳ ಕಾರ್ಯಕರ್ತರ ಕೇಸ್ ವಾಪಾಸ್ ತೆಗೆದಿತ್ತು.

ರಾಜ್ಯದಲ್ಲಿ ಪಿಎಫ್‌ಐ ಈ ಮಟ್ಟಿಗೆ ಬೆಳೆಯುವುದಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಕಾರಣ. ಅವರು ಅಧಿಕಾರದಲ್ಲಿ ಇದ್ದಾಗ ಪಿಎಫ್‌ಐ ಸಂಘಟನೆಯ ವಿರುದ್ಧ ದಾಖಲಾಗಿದ್ದ 100ಕ್ಕೂ ಹೆಚ್ಚು ಪ್ರಕರಣ ವಾಪಸ್ ಪಡೆಯಲಾಗಿತ್ತು. 1,400ಕ್ಕೂ ಹೆಚ್ಚು ಪಿಎಫ್‌ಐ ಉಗ್ರರಿಗೆ ಸಿದ್ದರಾಮಯ್ಯ ಕ್ಷಮಾದಾನ ನೀಡಿದ್ದರು. ಇದರ ಫಲವಾಗಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗೆ ಕಾಂಗ್ರೆಸ್ ಕಾರಣವಾಗಿತ್ತು ಎಂದು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

RELATED TOPICS:
English summary :Congress patronage is the reason for the growth of PFI: Sunil Kumar

ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ
ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರನ್ನು ಗುರಿಯಾಗಿಸಿ ಎಲ್ಇಟಿಯೊಂದಿಗೆ ಸಂಚು ರೂಪಿಸಿದ್ದ ಕಾರ್ಮಿಕನ ಮೇಲೆ ಎನ್ಐಎ ಆರೋಪಪಟ್ಟಿ
ಸರ್ಕಾರಿ ಸ್ಥಳಗಳಲ್ಲಿ ನಮಾಜ್  ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ
ಸರ್ಕಾರಿ ಸ್ಥಳಗಳಲ್ಲಿ ನಮಾಜ್ ಗೆ ಅವಕಾಶ ಕೊಡದಂತೆ ಒತ್ತಾಯಿಸಿ ಶಾಸಕ ಯತ್ನಾಳ್ ಸಿಎಂ ಗೆ ಪತ್ರ
33 ಸಾವಿರ ಕೋಟಿ ಬಿಲ್‌ ಬಾಕಿ ತೆರವು ಗೊಳಿಸಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಒತ್ತಾಯ
33 ಸಾವಿರ ಕೋಟಿ ಬಿಲ್‌ ಬಾಕಿ ತೆರವು ಗೊಳಿಸಲು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಒತ್ತಾಯ
ಪಂಜಾಬ್‌ ಡಿಐಜಿ ಬಂಧಿಸಿದ ಸಿಬಿಐ : ಹಿರಿಯ ಐಪಿಎಸ್ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣದ ಹೊಳೆ
ಪಂಜಾಬ್‌ ಡಿಐಜಿ ಬಂಧಿಸಿದ ಸಿಬಿಐ : ಹಿರಿಯ ಐಪಿಎಸ್ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣದ ಹೊಳೆ
ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ
ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ
ವಿಷ್ಣು ವಿಗ್ರಹ ಪ್ರಕರಣದಲ್ಲಿ ಸಿಜೆಐ ವಿವಾದಾತ್ಮಕ ಹೇಳಿಕೆ : ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ
ವಿಷ್ಣು ವಿಗ್ರಹ ಪ್ರಕರಣದಲ್ಲಿ ಸಿಜೆಐ ವಿವಾದಾತ್ಮಕ ಹೇಳಿಕೆ : ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ
ಅಧಿಕಾರ ಹಂಚಿಕೆ ಹಗ್ಗಜಗ್ಗಾಟ : ಸಿದ್ದರಾಮಯ್ಯ ಬಳಿಕ ಈಗ ಶಿವಕುಮಾರ್ ಹೇಳಿಕೆ ಬಿಡುಗಡೆ
ಅಧಿಕಾರ ಹಂಚಿಕೆ ಹಗ್ಗಜಗ್ಗಾಟ : ಸಿದ್ದರಾಮಯ್ಯ ಬಳಿಕ ಈಗ ಶಿವಕುಮಾರ್ ಹೇಳಿಕೆ ಬಿಡುಗಡೆ
ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ
ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ
ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್
ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ
ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ

ನ್ಯೂಸ್ MORE NEWS...